
ನಕಲಿ ವೋಟ್ ನಿಂದಲೇ ನನ್ನ ಮೊದಲ ಸೋಲಾಯ್ತು; ಬಿಜೆಪಿ ಗೆಲುವಿನ ರಹಸ್ಯ ಬಯಲು: ಖರ್ಗೆ
ಬೆಂಗಳೂರು: ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಸೋಲಿಗೆ ಚುನಾವಣಾ ಅಕ್ರಮವೇ ಕಾರಣ ಎಂದು ಶುಕ್ರವಾರ ಆರೋಪಿಸಿದ್ದಾರೆ ಮತಗಳ್ಳತನದ ವಿರುದ್ಧ ಇಂದು ನಗರದ ಫ್ರೀಡಂಪಾರ್ಕ್ನಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ 2019ರ ಸೋಲು ಹೊರತುಪಡಿಸಿ, ಎಂದಿಗೂ ಚುನಾವಣೆಯಲ್ಲಿ ಸೋಲು ಅನುಭವಿಸಿಲ್ಲ ಎಂದು ಹೇಳಿದರು. ನಾನು 2019ರ ಲೋಕಸಭೆ ಚುನಾವಣೆ ವೇಳೆ ಚುನಾವಣಾ ರಿಗ್ಗಿಂಗ್‌ಗೆ…