
August 2025


ನಕಲಿ ವೋಟ್ ನಿಂದಲೇ ನನ್ನ ಮೊದಲ ಸೋಲಾಯ್ತು; ಬಿಜೆಪಿ ಗೆಲುವಿನ ರಹಸ್ಯ ಬಯಲು: ಖರ್ಗೆ
ಬೆಂಗಳೂರು: ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಸೋಲಿಗೆ ಚುನಾವಣಾ ಅಕ್ರಮವೇ ಕಾರಣ ಎಂದು ಶುಕ್ರವಾರ ಆರೋಪಿಸಿದ್ದಾರೆ ಮತಗಳ್ಳತನದ ವಿರುದ್ಧ ಇಂದು ನಗರದ ಫ್ರೀಡಂಪಾರ್ಕ್ನಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ 2019ರ ಸೋಲು ಹೊರತುಪಡಿಸಿ, ಎಂದಿಗೂ ಚುನಾವಣೆಯಲ್ಲಿ ಸೋಲು ಅನುಭವಿಸಿಲ್ಲ ಎಂದು ಹೇಳಿದರು. ನಾನು 2019ರ ಲೋಕಸಭೆ ಚುನಾವಣೆ ವೇಳೆ ಚುನಾವಣಾ ರಿಗ್ಗಿಂಗ್‌ಗೆ…

ಅಮೆರಿಕಾಗೆ ಭಾರತ ಮತ್ತೊಂದು ಶಾಕ್; ಶಸ್ತ್ರಾಸ್ತ್ರ, ಯುದ್ಧ ವಿಮಾನ ಖರೀದಿಗೆ ‘ವಿರಾಮ’?
ನವದೆಹಲಿ: ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರುವ ಬೆದರಿಕೆ ಹಾಕಿರುವ ದೊಡ್ಡಣ್ಣ ಅಮೆರಿಕಕ್ಕೆ ಭಾರತ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಈ ಬಾರಿ ಶಸ್ತ್ರಾಸ್ತ್ರ, ಯುದ್ಧ ವಿಮಾನ ಖರೀದಿ ಯೋಜನೆಗೆ ಭಾರತ ತಾತ್ಕಾಲಿಕ ವಿರಾಮ ಹಾಕಿದೆ ಎಂದು ಹೇಳಲಾಗಿದೆ. ಹೌದು.. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ರಫ್ತುಗಳ ಮೇಲೆ ವಿಧಿಸಿದ ಸುಂಕಗಳು ದಶಕಗಳಲ್ಲಿಯೇ ಅತ್ಯಂತ ಗರಿಷ್ಟ ಮಟ್ಟಕ್ಕೆ ತಲುಪಿರುವ ಬೆನ್ನಲ್ಲೇ ಭಾರತದ ಅಸಮಾಧಾನದ ಮೊದಲ ಸ್ಪಷ್ಟ ಸಂಕೇತ ಹೊರಬಿದ್ದಿದ್ದು, ಕೇಂದ್ರ ಸರ್ಕಾರವು ಹೊಸ ಅಮೇರಿಕನ್ ಶಸ್ತ್ರಾಸ್ತ್ರಗಳು ಮತ್ತು…

ಇಂಗ್ಲೆಂಡ್ ಒಂದೇ ಒಂದು ಪಂದ್ಯವನ್ನು ಗೆಲ್ಲುವುದಿಲ್ಲ ಎಂದ ಆಸೀಸ್ ಲೆಜೆಂಡರಿ ವೇಗಿ
Ashes 2025-26: ಗ್ಲೆನ್ ಮೆಕ್‌ಗ್ರಾತ್ ಅವರು ಆಸ್ಟ್ರೇಲಿಯಾ ಆಶಸ್ ಸರಣಿಯನ್ನು 5-0 ಅಂತರದಿಂದ ಗೆಲ್ಲುವುದಾಗಿ ಭವಿಷ್ಯ ನುಡಿದಿದ್ದಾರೆ. ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗ ದುರ್ಬಲವಾಗಿದ್ದು, ಆಸ್ಟ್ರೇಲಿಯಾದ ವೇಗಿಗಳು ಮತ್ತು ನಾಥನ್ ಲಿಯಾನ್ ಅವರ ಸ್ಪಿನ್ ದಾಳಿಗೆ ಇಂಗ್ಲೆಂಡ್ ಸೆಣಸಾಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ರಾಜ್ಯಗಳಲ್ಲೂ ಅನರ್ಹ ಮತದಾರರಿಗೆ ಕೊಕ್
ನವದೆಹಲಿ, ಆಗಸ್ಟ್ 8:ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾದರೂ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತದೆ. ಸದ್ಯದಲ್ಲೇ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿಚಾರ ಮುಂಚೂಣಿಗೆ ಬಂದಿದೆ. ಕೇಂದ್ರ ಚುನಾವಣಾ ಆಯೋಗದ ಮೇಲೆ ಪ್ರಮುಖ ಪ್ರತಿಪಕ್ಷವಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಗಂಭೀರ ಆರೋಪ ಮಾಡುತ್ತಿದೆ. 2024ರ ಲೋಕಸಭಾ ಚುನಾವ ಣೆಗೂ ಮುನ್ನ ದೇಶಾದ್ಯಂತ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳಲ್ಲೂ ಮತದಾರರ ಪಟ್ಟಿಗೆ ಹೊಸದಾಗಿ ಅರ್ಹರನ್ನು ಸೇರಿಸುವ ಹಾಗೂ…

ಧರ್ಮಸ್ಥಳ ಕೇಸ್: ಮಾಧ್ಯಮಗಳ ಮೇಲಿನ ನಿರ್ಬಂಧಕ್ಕೆ ಸುಪ್ರೀಂಕೋರ್ಟ್ ನಕಾರ
ನವದೆಹಲಿ, ಆಗಸ್ಟ್ 8: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾನಹಾನಿಕರ ವರದಿಗಳನ್ನು ನಿರ್ಬಂಧಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಮಾಧ್ಯಮಗಳ ಮೇಲೆ ಯಾವುದೇ ನಿರ್ಬಂಧ ಹೇರಲು ನಿರಾಕರಿಸಿದೆ. ಇದರಿಂದ ತಡೆಯಾಜ್ಞೆ ಕೋರಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ ಧರ್ಮಸ್ಥಳ ದೇವಸ್ಥಾನದ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ. ಅವರಿಗೆ ಭಾರೀ ಹಿನ್ನಡೆಯಾಗಿದೆ. ‘ಹರ್ಷೇಂದ್ರ ಕುಮಾರ್ ಡಿ ವರ್ಸಸ್ ಕುಡ್ಲ ರ್‍ಯಾಂಪೇಜ್ ಮತ್ತು ಇತರರು’ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ…